- ಒಂದಿಷ್ಟು ಚಿಂತನೆ ಬೇಕು !
- ಡಾ. ಸುಂದರ್ ಸಾರುಕ್ಕೆ„ | Jul 03, 2011
ನಾಡಿನ ಪ್ರಮುಖ ಚಿಂತಕರಾಗಿರುವ ಡಾ. ಸುಂದರ್ ಸಾರುಕ್ಕೆ„ ಅವರು ಜಗತ್ತಿನ ವಿವಿಧ ತಣ್ತೀಶಾಸ್ತ್ರೀಯ ಚಿಂತನೆಗಳನ್ನು ಪ್ರತೀ ರವಿವಾರದ ಸಂಚಿಕೆಯಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.
ತಣ್ತೀಶಾಸ್ತ್ರವೆಂಬುದು ಕೇವಲ ಬುದ್ಧಿಜೀವಿಗಳಿಗೆ ಮೀಸಲಾದ ಸಂಗತಿಯಾಗದೆ ಎಲ್ಲರಿಗೂ ಸರಳವಾಗಿ ಅರ್ಥವಾಗಬೇಕೆಂಬುದು ಅವರ ಧೋರಣೆ. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಅವಜ್ಞೆಗೊಳಗಾಗಿರುವ ಕಲೆ, ಮಾನವಿಕ ಶಾಸ್ತ್ರ, ಸಮಾಜ ವಿಜ್ಞಾನಗಳಂಥ ಜೀವನ ಕಲೆಯನ್ನು ಕಲಿಸುವ ವಿಭಾಗಗಳಿಗೆ ಮತ್ತೆ ಪ್ರಾಶಸ್ತ್ಯ ಸಿಗಬೇಕೆಂಬುದು ಅವರ ಆಶಯ.
ಸುಂದರ ಸಾರುಕ್ಕೆ„ ಮೂಲತಃ ಭೌತಶಾಸ್ತ್ರಜ್ಞರು. ಅಮೆರಿಕದ ಪೆರ್ಡೂÂ ವಿ. ವಿ. ಯಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿ ತಣ್ತೀಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಪ್ರಸ್ತುತ, ಮಣಿಪಾಲ ವಿ. ವಿ.ಯಲ್ಲಿ "ಮಣಿಪಾಲ್ ಸೆಂಟರ್ ಫಾರ್ ಫಿಲಾಸಫಿ ಆಂಡ್ ಹ್ಯುಮ್ಯಾನಿಟೀಸ್' ವಿಭಾಗವನ್ನು ಆರಂಭಿಸಿ, ಅದರ ನಿರ್ದೇಶಕರಾಗಿದ್ದಾರೆ.
ಹ್ಯಾನಾ ಆರೆಂತ್ ಓರ್ವ ಪ್ರಮುಖ ರಾಜಕೀಯ ತತ್ತÌಶಾಸ್ತ್ರಜ್ಞೆ . ಅವರು ಮಹಾತತ್ತÌಶಾಸ್ತ್ರಜ್ಞರಾದ ಮಾರ್ಟಿನ್ ಹೇಡ್ಗರ್ ಹಾಗೂ ಕಾರ್ಲ್ ಜೇಸ್ಪರ್ ಇವರುಗಳ ವಿದ್ಯಾರ್ಥಿನಿ. ಓರ್ವ ಯಹೂದಿಯಾದ ಆಕೆ ಜರ್ಮನಿಯನ್ನು ತ್ಯಜಿಸಿ ಅಮೆರಿಕವನ್ನು ಸೇರಿಕೊಂಡರು. ಅಲ್ಲಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ತಣ್ತೀಶಾಸ್ತ್ರವನ್ನು ಬೋಧಿಸಿದರು. ಸರ್ವಾಧಿಕಾರ ವ್ಯವಸ್ಥೆಯ ಬಗ್ಗೆ , ಕ್ರಾಂತಿ-ಬಂಡಾಯಗಳ ಬಗ್ಗೆ, ಹಿಂಸೆಯ ಬಗ್ಗೆ , ಸಾಮಾನ್ಯವಾಗಿ ಮಾನವಿಕವೆನ್ನಬಹುದಾದ ಹತ್ತು ಹಲವು ಸಂಗತಿಗಳ ಬಗ್ಗೆ ಪ್ರಭಾವಕಾರಿಯಾದ ಗ್ರಂಥಗಳನ್ನು ಆಕೆ ರಚಿಸಿದ್ದಾರೆ.
ಅಡಾಲ್ಫ್ ಎಯ್cಮನ್ ಒಬ್ಬ ನಾಜಿ. ಸಾವಿರಾರು ಯಹೂದಿಗಳ ಮಾರಣ ಹೋಮಕ್ಕೆ ಕಾರಣನಾದ ವ್ಯಕ್ತಿ. ಹಿಟ್ಲರ್‌ನ ಆಳ್ವಿಕೆಯ ಪತನದ ಬಳಿಕ ಆತ ಜರ್ಮನಿಯಿಂದ ಹೊರಬಿದ್ದು ಅರ್ಜೆಂಟೀನಾಕ್ಕೆ ಪಲಾಯನ ಹೂಡಿ ಅಲ್ಲಿ ಅಜ್ಞಾತವಾಸದಲ್ಲಿದ್ದ. ಹಲವು ಪ್ರಯತ್ನಗಳ ಬಳಿಕ ಇಸ್ರೇಲಿ ಪೊಲೀಸರು ಆತನನ್ನು ಸೆರೆಹಿಡಿದು, ಯಹೂದಿಗಳ ವಿರುದ್ಧದ ಅಪಚಾರಕ್ಕಾಗಿ ವಿಚಾರಣೆಗೊಳಪಡಿಸಿದರು.
ಆರೆಂತ್ ಅವರು ಇಸ್ರೇಲ್‌ಗೆ ತೆರಳಿ ಈ ಪ್ರಕರಣದ ವಿಚಾರಣೆಯ ವಿವರಗಳನ್ನು ಪ್ರಭಾವೀ ಪತ್ರಿಕೆಯಾದ ನ್ಯೂಯಾರ್ಕರ್‌ಗೆ ಹಂತ ಹಂತವಾಗಿ ವರದಿ ಮಾಡುತ್ತ ಬಂದರು. ಬಳಿಕ ಈ ವರದಿಗಳನ್ನೆಲ್ಲ ಒಂದು ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಈ ಪುಸ್ತಕದ ಹೆಸರು - ಎಯ್cಮನ್ ಇನ್ ಜೆರೂಸಲೆಂ: ಎ ರಿಪೋರ್ಟ್ ಆನ್ ಬೆನಾಲಿಟಿ ಆಫ್ ಈವಿಲ್.
ಸ್ವತಃ ಯಹೂದಿಯಾಗಿದ್ದೂ ಆರೆಂತ್ ಅವರು ಎಯ್cಮನ್ ಬಗ್ಗೆ ಬರೆದ ಮಾತೊಂದು ಇತರ ಯಹೂದಿಗಳನ್ನು ಕೆರಳಿಸಿಬಿಟ್ಟಿತು. ಎಯ್cಮನ್ ಕುರಿತಂತೆ ಆಕೆಗೆ ಅನ್ನಿಸಿದ್ದೆಂದರೆ - ಆತ ಒಬ್ಬ "ಸಾಮಾನ್ಯ' ವ್ಯಕ್ತಿ. ಆತ ಮಾಡಿದ್ದು ವಿಪರೀತಾರ್ಥದಲ್ಲಿ ಕೆಡುಕೇ ಹೌದು. ಆ ಬಗ್ಗೆ ಎರಡು ಮಾತಿಲ್ಲ. ಆದರೆ ಎಯ್cಮನ್ ಒಬ್ಬ ರಾಕ್ಷಸನಲ್ಲ. ಇತರ ಅನೇಕರಂತೆ ಒಬ್ಬ ಸಾಮಾನ್ಯ ಮನುಷ್ಯ. ಆರೆಂತ್ ಅವರ ಈ ಅಭಿಮಧಿತ ಯಹೂದ್ಯ ಸಮುದಾಯವನ್ನು ಸಿಟ್ಟಿಗೆಬ್ಬಿಸಿತು. ಕಾರಣ, ಅವರ ಈ ಅಭಿಪ್ರಾಯ ಎಯ್cಮನ್‌ನ ಭೀಕರ ಅಪರಾಧವನ್ನು ಮನ್ನಿಸುವ ಸಾಧ್ಯತೆಗೆ ಹಾದಿಮಾಡಿಕೊಡುವಂಥದಾಗಿತ್ತು.
ಆದರೆ ಆರೆಂತ್ ಹೇಳಿದ್ದರಲ್ಲಿ ಗಂಭೀರ ಸತ್ಯವಿತ್ತು. ಕೆಡುಕಿನ ಮೂಲ ಕಂಡುಬರುವುದು, ಸಾಮಾನ್ಯತೆಯಲ್ಲೆ ಎಂಬುದಾಗಿತ್ತು ಅವರ ವಾದ. ದತ್ತ ಸನ್ನಿವೇಶವೊಂದರಲ್ಲಿ ದುಷ್ಟರಾಗಿ ಬಿಡುವ ಸಾಧ್ಯತೆ ನಮ್ಮೆಲ್ಲರಲ್ಲೂ ಇದೆ. ಇನ್ನೂ ಮುಖ್ಯವಾದ ಸಂಗತಿಯೆಂದರೆ ತನ್ನ ಕುಕೃತ್ಯದ ಬಗ್ಗೆ ಎಯ್cಮನ್ ಸ್ವಲ್ಪ ಯೋಚಿಸಿದ್ದಿದ್ದರೆ, ಬಹುಶಃ ಅದನ್ನು ಎಸಗುವ ಗೋಜಿಗೇ ಹೋಗುತ್ತಿರಲಿಲ್ಲ ವೇನೋ. ಏಯ್cಮನ್‌ನದು ಯೋಚಿಸದೆ ಮಾಡಿದ ಕಾರ್ಯ. ತಲೆ ಓಡಿಸದೆ ತೋರಿದ ವಿಧೇಯತೆ.
ಕೆಡುಕು ಎಸಗುವ ಸಾಮರ್ಥ್ಯ ನಮಗೆ ಬರುವುದು ಚಿಂತನರಹಿತ ಜೀವನ ವಿಧಾನದಿಂದ. ಆರೆಂತ್ ಅವರು ಸೂಚಿಸಬಯಸಿದ್ದು ಇದೇ ವಾಸ್ತವಾಂಶವನ್ನು. ಸಾಮಾನ್ಯರಾಗಿ ಇರುವುದೆಂದರೆ ಯೋಚನಾರಹಿತವಾಗಿ, ಚಿಂತನರಹಿತರಾಗಿ ಕಾರ್ಯವೆಸಗಲು ಮುಂದಾಗುವುದು. ಆರೆಂತ್ ಅವರ ಈ ಮಾತನ್ನು ಇತರ ಹಲವು ಮಂದಿ ತಣ್ತೀಶಾಸ್ತ್ರಜ್ಞರು ದೀರ್ಘಕಾಲದಿಂದ ಹೇಳುತ್ತಲೇ ಬಂದಿದ್ದಾರೆ. ಮಾನವೀಯವಾಗಿ ಇರುವುದೆಂದರೇನು? ಈ ಪ್ರಶ್ನೆಗೆ ಇರುವ ಒಂದು ಉತ್ತರವೆಂದರೆ, ಅರಿಸ್ಟಾಟಲ್ ಹೇಳಿದಂತೆ, "ಮನುಷ್ಯರು ವಿವೇಚನಾಶಕ್ತಿಯುಳ್ಳ ಪ್ರಾಣಿಗಳು' ಎಂಬುದೇ. ಮಾನವರಲ್ಲಿರುವ ವಿಶೇಷತೆಯೆಂದರೆ, ಚಿಂತಿಸುವ ಸಾಮರ್ಥ್ಯ ಹಾಗೂ ವಿವೇಕವನ್ನು ಬಳಸಿಕೊಳ್ಳುವ ಸಾಮರ್ಥ್ಯ. ವಿವೇಚನೆ ಅಥವಾ ವಿವೇಕಕ್ಕೆ ಹೀಗೆ ಒತ್ತು ನೀಡಿದ್ದರಿಂದಲೇ ಆಧುನಿಕ ನಾಗರಿಕತೆಯ ಉಗಮ ಸಾಧ್ಯವಾಯಿತು ಕನಿಷ್ಠ ಯುರೋಪಿನ ಮಟ್ಟಿಗಾದರೂ ಇದು ನಿಜ.
ಆದರೆ, ಚಿಂತನೆ ಎಂದರೆ ನಿಜವಾಗಿ ಏನು? ಚಿಂತಿಸುವುದು - ಎಂಬುದನ್ನು ನಾವು ಯಾವ ಅರ್ಥದಲ್ಲಿ ಬಳಸುತ್ತಿದ್ದೇವೆ? ಚಿಂತಿಸುವ ಗುಣ, ಕಲಿತು ಬರುವಂಥದ್ದೆ? ಅಥವಾ ಅದು ಅನಾಯಾಸವಾಗಿ ನಮ್ಮಲ್ಲಿ ಉದಿಸಿ ಬರುವಂಥದ್ದೆ? ಆಶ್ಚರ್ಯದ ಮಾತೆಂದರೆ ಇಂದಿನ ಸಮಾಜದ ಪಾಲಿಗೆ ಯೋಚಿಸುವ, ಚಿಂತಿಸುವ ಕೆಲಸ ಒಂದು ದೊಡ್ಡ ಸಮಸ್ಯೆಯೇ ಆಗಿಬಿಟ್ಟಿದೆ. ನಮ್ಮ ಸಮಾಜದ ಮಟ್ಟಿಗಂತೂ ಇದು ಸತ್ಯ.
ನಮ್ಮಲ್ಲೊಂದು ನಂಬಿಕೆಯಿದೆ - "ಅನಗತ್ಯವಾಗಿ ಯೋಚಿಸಕೂಡದು' ಎಂಬ ನಂಬಿಕೆ! "ಹೆಚ್ಚು ಯೋಚಿಸಿದರೆ ಕೆಲಸ ನಿಂತುಹೋಗುತ್ತದೆ; ನಮ್ಮ ದಿನನಿತ್ಯದ ಕೆಲಸ ಕಾರ್ಯಗಳ ಬಗ್ಗೆ ಯೋಚಿಸುತ್ತ ಕೂರಲು ಸಾಧ್ಯವಿಲ್ಲ. ಅದಕ್ಕೆಲ್ಲ ನಮಗೆ ಶಕ್ತಿಯೂ ಇಲ್ಲ, ಸಮಯವೂ ಇಲ್ಲ' ಎಂದು ಅನೇಕರು ಹೇಳುವುದುಂಟು. ಮಾರ್ಕ್ಸ್ನ ಪ್ರಖ್ಯಾತ ಹೇಳಿಕೆ ಇದು - "ನಮಗಿವತ್ತು ಅಗತ್ಯವಾಗಿರುವುದು ಸಮಾಜದಲ್ಲಿ ಬದಲಾವಣೆಯೇ ವಿನಾ ಫಿಲಾಸಫಿಯಲ್ಲ !' ಸಮಾಜದ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಯೋನ್ಮುಖರಾಗುವ ಬದಲಿಗೆ ಆ ಬಗ್ಗೆ ಚಿಂತನೆ ನಡೆಸುತ್ತ ಕೂರುವ ಮಂದಿಯ ಬಗ್ಗೆ ಆಂದೋಲನನಿರತ ವ್ಯಕ್ತಿಗಳಿಗೆ ಅಷ್ಟೊಂದು ಗೌರವ ಇಲ್ಲ.
ನಮ್ಮ ಸಮಾಜವಾದರೋ ಚಿಂತನರಾಹಿತ್ಯದ ಸಂಭ್ರಮಾಚರಣೆಯಲ್ಲಿ ಮುಳುಗಿದೆ! ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ನಮ್ಮ ಶಿಕ್ಷಣ ವ್ಯವಸ್ಥೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಅಧ್ಯಾಪಕ ಹೇಳಿದ್ದನ್ನು ಆಲಿಸತಕ್ಕದ್ದು, ಪ್ರಶ್ನೆಗಳನ್ನು ಕೇಳತಕ್ಕದ್ದಲ್ಲ ಎಂಬಂಥ ವಾತಾವರಣವಿದೆ. ವಿದ್ಯಾರ್ಥಿಗಳಿಗೆ ತಲುಪಬೇಕಾದ ಜ್ಞಾನ ಹರಿದು ಬರುವುದು ಶಿಕ್ಷಕನಿಂದ ಇಲ್ಲವೇ, ಪುಸ್ತಕಗಳಿಂದ. ಇವೇ ಪ್ರಮಾಣಗಳು. ಈ ಪ್ರಮಾಣಗಳನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಅಪಾಯ ಕಟ್ಟಿಟ್ಟದ್ದು! ವಾಸ್ತವವೆಂದರೆ, ಕಳೆದ ಅನೇಕ ವರ್ಷಗಳಿಂದ ನಮ್ಮ ವಿದ್ಯಾರ್ಥಿಗಳು ಪುಸ್ತಕಗಳಿಂದ ಕೂಡ ಕಲಿಯುತ್ತಿಲ್ಲ ; ಅವರು ಓದುತ್ತಿರುವುದು ಪಠ್ಯಗಳನ್ನಲ್ಲ , ಕೈಪಿಡಿ (ಗೈಡ್)ಗಳನ್ನು. ನಿಜ ಹೇಳಬೇಕೆಂದರೆ ಈ ಗೈಡುಗಳು ಚಿಂತನಶೀಲತೆಯ ನಂಬರ್‌ವನ್ ಶತ್ರು! ಇನ್ನು , ಕಾಲೇಜುಗಳಲ್ಲಿನ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಅಲ್ಲಿ ನಡೆಯುವ ಪರೀಕ್ಷೆಗಳು ಕೂಡ ಇಂಥ ಯೋಚನೆ ಮಾಡದೆ ಕಲಿಯುವ ಕವಾಯತಿನ ಮೇಲೆ ಅವಲಂಬಿತವಾಗಿವೆ.
ಇನ್ನು ಮನೆಗಳಲ್ಲಿ ಕಂಡುಬರುವ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ತಾನೇನು ಓದಬೇಕೆಂಬುದನ್ನು ಯೋಚಿಸುವವರು ತಮ್ಮ ಅಪ್ಪ ಅಮ್ಮ ಎಂದು ಮಕ್ಕಳು ಹೇಳುವುದನ್ನು ಕೇಳಿದಾಗಲೆಲ್ಲ ನನಗೆ ಎಲ್ಲಿಲ್ಲದ ಅಚ್ಚರಿಯಾಗುತ್ತದೆ.
ಯಾವುದಕ್ಕೂ ಸಮಯವಿಲ್ಲ ಎಂಬಂಥ ಕಾಲದಲ್ಲಿ ನಾವಿಂದು ಬದುಕುತ್ತಿದ್ದೇವೆ. ನಾವು ಕಾಲವನ್ನು ನಾಶಪಡಿಸಿದ್ದೇವೆ; ಅದರ ಸ್ಥಾನದಲ್ಲಿ ಬಯಕೆಯನ್ನು ಸ್ಥಾಪಿಸಿದ್ದೇವೆ. ಆಯ್ಕೆಗಳಲ್ಲಷ್ಟೇ ತೃಪ್ತಿಪಟ್ಟುಕೊಂಡಿದ್ದೇವೆ. ನಮ್ಮೆದುರು ಆಯ್ಕೆಗಳಿವೆ ಎಂದರಾಯಿತು, ನಾವು ಯೋಚಿಸುತ್ತೇವೆಯೆ ಇಲ್ಲವೇ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆಯ್ಕೆಯ ಕೊಡುಗೆ ಧಾರಾಳ; ಯೋಚನೆಗೆ ಅವಕಾಶ ಇಲ್ಲ - ಎಂಬಂಥ ಸನ್ನಿವೇಶಕ್ಕೆ ಉತ್ತಮ ಉದಾಹರಣೆ ಮಾಲ್‌ಗಳು! ಆದರೆ, ಮೂಲಭೂತ ಪ್ರಶ್ನೆ ಇದು: ಶಿಕ್ಷಣ ಕ್ಷೇತ್ರದಲ್ಲಿನ ಆಯ್ಕೆಯೆ ಇರಲಿ, ಜೀವನ ನಿರ್ವಹಣ ಮಾರ್ಗ ಕುರಿತ ಆಯ್ಕೆಯೆ ಇರಲಿ - ನಾವು ಮಾಡುವ ಆಯ್ಕೆಯ ಬಗ್ಗೆ ಎಂದಾದರೂ ಯೋಚಿಸುತ್ತೇವೆಯೇ?
ನಾವು ನಿಜವಾಗಿಯೂ ಆಯ್ಕೆಮಾಡಿಕೊಳ್ಳುವುದು ಯಾವುದನ್ನು? ನಮ್ಮ ಜಾತಿ, ಧರ್ಮ, ಹೆಸರುಗಳು, ಊಟ-ತಿಂಡಿ ಕುರಿತ ಇಷ್ಟಾನಿಷ್ಟಗಳು ಕೂಡ ಯಾರೋ ಈಗಾಗಲೇ ಒದಗಿಸಿರುವಂಥವೇ ಆಗಿವೆ. ನಮ್ಮ ಬಟ್ಟೆಬರೆಯ "ಆಯ್ಕೆ'ಗಾಗಿ ಸಾಕಷ್ಟು ಸಮಯ ವ್ಯಯಿಸುತ್ತೇವೆಂಬುದು ನಿಜವಾದರೂ ಅದರ ಹಿಂದೆ ಜಾಹೀರಾತುಗಳ ಪ್ರೇರಣೆಯಿರುತ್ತದೆ. ಶಾರುಖ್ ಖಾನ್ ಅಥವಾ ಅಂಥ ಇನ್ಯಾರೋ ಚಿತ್ರತಾರೆಯರ ಡ್ರೆಸ್‌ಗಳ ಮಾದರಿಗಳನ್ನು ನೋಡಿ ನಾವೂ ಅಂಥವನ್ನೇ ಖರೀದಿಸುತ್ತೇವೆ. ಜೇಮ್ಸ್ ಬಾಂಡ್ ಬಳಸಿದ ಸೂಟುಗಳು ಇವು - ಎನ್ನುತ್ತ ಅವುಗಳನ್ನು ಮಾರುತ್ತೇವೆ (ಅಗತ್ಯವಾಗಿ ಗಮನಿಸಿ - ಜೇಮ್ಸ್ ಬಾಂಡ್ ಅಸ್ತಿತ್ವದಲ್ಲೇ ಇಲ್ಲ; ಅವನೊಬ್ಬ ಸಂಪೂರ್ಣ ಕಾಲ್ಪನಿಕ ವ್ಯಕ್ತಿ!)
ಹೀಗೆ, ನಮ್ಮ ಜೀವನದಲ್ಲಿ ನಿಜವಾಗಿಯೂ, ನಿಜವಾದ ಆಯ್ಕೆ ಎಂಬುದೊಂದಿಲ್ಲ. ನಮ್ಮ ಸುತ್ತಲ ಸಮಾಜದ ವಿವಿಧ ವರ್ಗಗಳ ಕೈಯಲ್ಲಿ ಆಡುತ್ತಿರುವ ಗೊಂಬೆಗಳ ಹಾಗಾಗಿದ್ದೇವೆ ನಾವು. ಮಾಲ್‌ಗಳ ಜಗತ್ತು ಹಾಗೂ ಗ್ರಾಹಕೀಕರಣದ ಪ್ರಕ್ರಿಯೆ ನಮಗಾಗಿ ಹೊಸ ಜಗತ್ತೂಂದನ್ನು ಸೃಷ್ಟಿಸಿಕೊಡುತ್ತಿದೆ. ನಾವೋ, ಜಗತ್ತು ಹೇರಳ ಆಯ್ಕೆಗಳಿಂದ ತುಂಬಿದೆ ಎಂದುಕೊಂಡಿದ್ದೇವೆ.
ಇಂಥ ಜಗತ್ತಿನಲ್ಲಿ ಚಿಂತನೆಗೆ, ಯೋಚನೆಗೆ ಅವಕಾಶವೇ ಇಲ್ಲ.
ಯೋಚಿಸುವುದು ಒಳ್ಳೆಯದಲ್ಲ ಎಂಬುದು ನಮ್ಮ ಸಮಾಜದ ಯೋಚನೆ. ನಾವು ನಮ್ಮ ಮಕ್ಕಳಿಗೆ ಯೋಚನೆ ಮಾಡುವುದನ್ನು , ಚಿಂತಿಸುವುದನ್ನು ಕಲಿಸುತ್ತಿಲ್ಲ. ಎಳೆವಯಸ್ಸಿನ ನಮ್ಮ ಮಕ್ಕಳು ಎಲ್ಲಿ ಸ್ವಂತ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತಾರೋ ಎಂದು ನಾವು ಹೆದರುತ್ತಿದ್ದೇವೆ! ಪ್ರತಿಯೊಬ್ಬನೂ ಒಂದೇ ರೀತಿ ವರ್ತಿಸಬೇಕು, ಒಂದೇ ರೀತಿ ಬಟ್ಟೆ ಧರಿಸಬೇಕು, ಒಂದೇ ರೀತಿ ಕೆಲಸ ಮಾಡಬೇಕು ಎಂಬುದು ನಮ್ಮ ಬಯಕೆ. ಇತ್ತೀಚೆಗಷ್ಟೇ ಒಂದು ಜಾಹೀರಾತನ್ನು ನೋಡಿದೆ. "ಯೋಚನೆ ಬೇಡಾ ಈಗ, ಕಾಲ್ ಮಾಡಿ ಬೇಗಾ!' - ಎಂದು ಕರೆ ನೀಡುತ್ತಿದೆ ಈ ಜಾಹೀರಾತು. ಹೌದು, ಕೆಲಸ ಮಾಡಲು ಹೊರಟಾಗ ಯೋಚನೆ ಮಾಡಬೇಕಾದ ಅಗತ್ಯವೇನಿದೆ?
ಮುಕ್ತವಾಗಿ ಯೋಚಿಸುವುದರ ಬಗ್ಗೆ ನಮಗೆ ಯಾಕೆ ಇಷ್ಟೊಂದು ಹೆದರಿಕೆ? ಯೋಚಿಸಿದರೆ ನಮ್ಮ ನಂಬಿಕೆಗಳು ಹಾಗೂ ಬಯಕೆಗಳು ನುಚ್ಚುನೂರಾಗಬಹುದೆಂದೆ? ಚಿಂತನೆಯ ಮೂಲಕವಷ್ಟೇ ನಮ್ಮ ನಿಜವಾದ ಬಯಕೆಗಳೇನು, ನಂಬಿಕೆಗಳೇನು ಎಂಬುದನ್ನು ಅರಿತುಕೊಳ್ಳಬಹುದೆ? ಆರೆಂತ್ ಅವರು ವಾದಿಸುವಂತೆ, ಯೋಚನೆಯನ್ನೆ ಕೈಬಿಟ್ಟ ಸಮಾಜ ವಿವಿಧ ರೀತಿಯ ಪಾತಕಗಳ ಸೃಷ್ಟಿಗೆ ಕಾರಣವಾದೀತೆಂಬ ಕಾಳಜಿ ನಮಗೆ ಬೇಡವೆ?
ಇಂಥ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ, ಎಲ್ಲಕ್ಕಿಂತ ಮೊದಲಿಗೆ ನಾವು ಯೋಚನೆಯ ಬಗ್ಗೆ ಆಲೋಚಿಸಬೇಕು. ಆಲೋಚನೆ ಎಂದರೇನು? ಅದು ಯಾವ ತೆರನ ಪ್ರಕ್ರಿಯೆ? ವಿಮಶಾìತ್ಮಕ ಹಾಗೂ ಸೃಜನಾತ್ಮಕ ಆಲೋಚನೆಗಳು ಒಬ್ಬ ವ್ಯಕ್ತಿಯ ಅಥವಾ ಒಂದು ಸಮಾಜದ ಆರೋಗ್ಯಕ್ಕೆ ಅತ್ಯಗತ್ಯ ಎಂದು ಜಗತ್ತಿನ ಕೆಲ ಪ್ರಭಾವಶೀಲ ಚಿಂತಕರು ಯಾಕೆ ವಾದಿಸುತ್ತಿದ್ದಾರೆ?
ಮೊದಲಿಗೆ ಚಿಂತನೆಯ ಸ್ವರೂಪ, ಲಕ್ಷಣ ಕುರಿತಂತೆ ನನ್ನ ಆಲೋಚನೆಗಳನ್ನು ಸಾದರಪಡಿಸುವುದು ಈ ಅಂಕಣದ ಉದ್ದೇಶ. ಈ ಅಂಕಣ ತಣ್ತೀಶಾಸ್ತ್ರ , ವಿಜ್ಞಾನ, ಸಮಾಜವಿಜ್ಞಾನ, ಸಾಹಿತ್ಯ ಹಾಗೂ ಕಲೆ ಇವುಗಳನ್ನೆಲ್ಲ ಚರ್ಚೆಗೆ ಆಹ್ವಾನಿಸುವ ವೇದಿಕೆಯಾಗಬೇಕೆಂಬುದು ನನ್ನ ಆಶಯ. ಓದುಗರೂ ಈ ಚರ್ಚೆಯಲ್ಲಿ ಸೇರಿಕೊಳ್ಳುವಂತಾಗಬೇಕು ಎಂಬುಧಿದು ನನ್ನ ಆಧಿಸೆ. ಯಾಕೆಂದರೆ ಆಲೋಚನೆ/ಚಿಂತನೆ ಆರಂಭಗೊಳ್ಳುವುದು ಸಂವಾದದಿಂದ. ಅದು ಮೊದಲು ಶುರುವಾಗುವುದು ನಾವು ನಮ್ಮೊಂದಿಗೆ ಸಂವಾದ ನಡೆಸಿದಾಗ. ಆಲೋಚನೆಯೆಂಬುದು ಎಲ್ಲಕ್ಕಿಂತ ಮೊದಲಿಗೆ ಸ್ವ-ಸಂವಾದವೇ ಆಗಿದೆ. ಇದನ್ನೇ ಮುಂದಿನ ಅಂಕಣದಲ್ಲಿ ಚರ್ಚಿಸಲಿದ್ದೇನೆ.
This blog is an experiment in using blogs in higher education. Most of the experiments done here are the first of their kind at least in India. I wish this trend catches on.... The Blog is dedicated to Anup Dhar and Lawrence Liang whose work has influenced many like me . . . .
Now you can view this blog on your mobile phones! Give a try.
Sunday, July 03, 2011
ಒಂದಿಷ್ಟು ಚಿಂತನೆ ಬೇಕು ! - ಸುಂದರ್ ಸಾರುಕ್ಕೆ„
Subscribe to:
Post Comments (Atom)
No comments:
Post a Comment